ಮುಟ್ಟಬಾರದ ತಲೆ ತಟ್ಟಬಾರದ ಗಮನ
ಬಿಟ್ಟು ಬಿಟ್ಟು ನಡೆವ ದಿಟ್ಟರಾರು ಹೇಳಾ?
ಹಬ್ಬಿದ ಮುಸಿಯೊಳಗೆ ಬೆಳೆದ ಬೆಳಸಿಯ ಕೊಯ್ದು ಮರಳಿ ಚಿಗುರಿಸಿ
ಬೆಳೆದು ವೇದಿಸಿ ಸುಖಿಸುವ ಮಹಿಮರಿನ್ನಾರು ಹೇಳಾ?
ನೀರ ಹಕ್ಕಿಯ ಪಕ್ಕವಮುರಿದು, ಹುಲಿಯ ಕೊಂದು ಕಾಡಕೋಣನ ಕಡಿದು,
ಊರಮೇಗಣ ಮಠದೊಳಗೆಸೆವ ಗುರುನಿರಂಜನ ಚನ್ನಬಸವಲಿಂಗಕ್ಕೆ
ಶರಣೆಂದು ಬದುಕುವರಾರು ಹೇಳಾ?