Index   ವಚನ - 239    Search  
 
ಒಡದು ಮೂಡಿ ನಿಗುರಿ ನೋಡಿ ಕಡಿದು ಬಿಸಾಟಿದಲ್ಲಿ ಬೆಂಕಿ ಹುಟ್ಟಿತ್ತು ನೋಡಾ! ಬೆಂಕಿಪುರುಷನ ಸಂಗದಿಂದೆ ಮಂಗಲಮಹಿಮನ ಕಂಡು ಅಂಗಳದಲ್ಲಿ ಕೂಡಿದರೆ, ಮನೆ ಸುಟ್ಟು ಹಾವೆದ್ದು ಕಿಚ್ಚ ಹಿಡಿದು ಮೇಲು ಮಂಟಪಕ್ಕೆ ನೆಗೆಯಲು, ಉರಿಯ ಬೆಳಗಿನೊಳಗಿರ್ದ ಗುರುನಿರಂಜನ ಚನ್ನಬಸವಲಿಂಗದಂಗವ ಬೆರೆದು ಚರಿಸುವ ಲೀಲೆಯ ನೋಡಾ.