Index   ವಚನ - 241    Search  
 
ಅಚ್ಚ ಮಹೇಶ್ವರನ ಕಚ್ಚುಟವ ಧರಿಸಿ ನಿಚ್ಚ ನಿಚ್ಚಕೆ ಕಾಳು ಕಾಂಚಾಣ ಕಪಟಕ್ಕೆ ಕೈಯೊಡ್ಡಿ, ಸಚ್ಚಿದಾನಂದ ಶಿವನ ಅರಿಯದ ನುಚ್ಚಮಾನವರು ಬೇಡಿಕೊಂಡು ಆಡಿಗಳವ ಕುಚಿತ್ತ ಖೂಳರ ಚುಚ್ಚಿಹಾಕುವರು ಭವದತ್ತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.