ಪೂರ್ವದೈವರ ಕಾಲತೊಳೆಸಿ ನಡೆಸಬೇಕು.
ಉತ್ತರದೈವರ ಕಾಲತೊಳೆಸಿ ನಡೆಸಬೇಕು.
ಪಶ್ಚಿಮದೈವರ ಬಾಯಿತೊಳೆಸಿ ನಡೆಸಬೇಕು.
ಮೆರೆವ ಮೂವರ ಸಿರಿಯತೊಳೆಸಿ,
ಇಂತಿವರಕೂಡಿ ಗುರುನಿರಂಜನ
ಚನ್ನಬಸವಲಿಂಗದತ್ತ
ಅಭಿಮುಖವಾಗಿ ನಡೆಯಬೇಕು.
Art
Manuscript
Music
Courtesy:
Transliteration
Pūrvadaivara kālatoḷesi naḍesabēku.
Uttaradaivara kālatoḷesi naḍesabēku.
Paścimadaivara bāyitoḷesi naḍesabēku.
Mereva mūvara siriyatoḷesi,
intivarakūḍi guruniran̄jana
cannabasavaliṅgadatta
abhimukhavāgi naḍeyabēku.