Index   ವಚನ - 249    Search  
 
ಕ್ರಿಯಾಗಮ್ಯಲಿಂಗವನು ಸತ್ಕ್ರಿಯಾ ಭಕ್ತಿಯಿಂದೆ ತ್ಯಾಗಾಂಗದಲ್ಲಿ ಧರಿಸಿದ ವಿರಾಗ್ರತೆಯನುಳ್ಳ ಮಾಹೇಶ್ವರನು ಕಾಯಕದಲ್ಲಿ ವಾಚಕ ಮಾನಸ ಸಂವಿತ್ಪ್ರಭಾನಂದಮಯವಾಗಿತೋರುತ್ತಿಹನಲ್ಲದೆ, ಅಂಗಭವಿ ವೇಷಧಾರಿಗಳಂತಲ್ಲ ನೋಡಾ! ಜ್ಞಾನಗಮ್ಯಲಿಂಗವನು ಸುಜ್ಞಾನಭಕ್ತಿಯಿಂದೆ ಭೋಗಾಂಗದಲ್ಲಿ ಧರಿಸಿದ ಕಡುಗಲಿ ವೀರಮಾಹೇಶ್ವರನು ವಾಚಕದಲ್ಲಿ ಮಾನಸ ಕಾಯಕ ಮಹೋತ್ಸಾಹಮಯವಾಗಿ ತೋರುತ್ತಿಹನಲ್ಲದೆ, ಪ್ರಾಣಭವಿ ವೇಷಧಾರಿಗಳಂತಲ್ಲ ನೋಡಾ! ಭಾವಗಮ್ಯಲಿಂಗವನು ಮಹಾಜ್ಞಾನಭಕ್ತಿಯಿಂದೆ ಯೋಗಾಂಗದಲ್ಲಿ ಧರಿಸಿದ ಘನಗಂಭೀರಮಾಹೇಶ್ವರನು ತನ್ನ ಮಾನಸದಲ್ಲಿ ಕಾಯಕ ವಾಚಕ ಪರಮಶಾಂತ ಜ್ಞಾನಮಯವಾಗಿ ತೋರುತ್ತಿಹನಲ್ಲದೆ, ಆತ್ಮಭವಿ ವೇಷಧಾರಿಗಳಂತಲ್ಲ ನೋಡಾ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಷಟ್‍ಸ್ಥಲಗಮ್ಯ ಷಡುದರ್ಶನಗಮ್ಯ ನೋಡಾ!