Index   ವಚನ - 251    Search  
 
ಕಚ ನವೀನ ಕುಚ ಜಘನದ ಕುವರಿಯರ ಸವಿನುಡಿಯ ಸೆಳವಿಗೆ ಕವಳಿಸಿ ಬಿದ್ದು ಮುಳುಗಿ ಬೆಳಗುಗತ್ತಲೆಯೊಳಿರುವರಗಣಿತರು. ಹಿರಿಯರೆಂದೆನಿಸಿಕೊಂಡ ಬರಿ ಮನುಜರು ಮನೆಮನೆಯರಸಿಯರ ವಿನಯವೆರೆದು, ಘನಭಕ್ತಿಜ್ಞಾನವೈರಾಗ್ಯದಿಂದನುಪಮಲಿಂಗಕ್ಕೆ ತನುಮನಧನವೀವ ಅನುವನವರೆತ್ತಬಲ್ಲರಯ್ಯಾ? ಹುಸಿ ದಿಟ, ಕಳ್ಳ ಸಹಜ, ಮಸಿ ಧವಲ ಮಾಡಲುಂಟೆ? ಗುರುನಿರಂಜನ ಚನ್ನಬಸವಲಿಂಗಕ್ಕೆ ತಪ್ಪುಕರು ಅಪ್ಪಬಲ್ಲರೆ?