Index   ವಚನ - 262    Search  
 
ಕಡಗೊಂಡ ಧನದಿಂದೆ ಗಳಿಸಿಕೊಡಲೊಲ್ಲದೆ ನೋಡಿ ನೋಡಿ ಮಿಡುಕುವ ತುಡುಗುಣಿಯಂತೆ, ಎನ್ನೊಡೆಯರು ಅಡಿಯಿಟ್ಟು ಬರಲು ಗಡಬಡಗೊಂಡು ಮನೆ ಮಡದಿ ಮಕ್ಕಳ ಮೋಹ ತಲೆಗೇರಿ, ಸಲುಗೆಯನಿದಿರಿಟ್ಟು ಸರಿದುಕೊಂಡಿರುವ ಒಳಗಳ್ಳಗೆಂತು ಭಕ್ತಿಯಪ್ಪುದಯ್ಯಾ! ನಿಮ್ಮಡಿಯೊಳು ಬಿದ್ದ ಆ ಜಡ ಭಕ್ತಿಗನುವಾಗಿ ಬಾ ಗುರುನಿರಂಜನ ಚನ್ನಬಸವಲಿಂಗಾ.