Index   ವಚನ - 291    Search  
 
ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ವೇದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ಸಾಧ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ನೂತನ ಪುರಾತನರು ಕೂಡಿ ನೋತು ಮಾಡಿದನುಭಾವದಲ್ಲಿ ಪರಮಸುಖಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗಾ.