ಸಾಧಕಯೋಗದಿಂದ ನಾದಬಿಂದುಕಳೆಯ ಹುಡುಕಿ ಕಂಡು ಕೂಡಬೇಕೆಂಬ
ಆಯಾಸಯೋಗಿಗಳನೇನೆಂಬೆನಯ್ಯಾ.
ನಾದಬಿಂದುಕಳೆಯೊಳಡಗಿರ್ದ ಮಹಾಪ್ರಕಾಶವ
ಗುರುಮುಖದಿಂದೆ ಕರಸ್ಥಲಕ್ಕೆ ತಂದು,
ಸತ್ಕ್ರಿಯೆಯಿಂದೆ ಸಮವೇದಿಸಿ ಸರ್ವಾಂಗಲಿಂಗಮಯವಾಗಿ
ಸುಖಿಸುವ ಭೇದವನರಿಯದೆ ಬಂದುಹೋದ
ಗುರುನಿರಂಜನ ಚನ್ನಬಸವಲಿಂಗಕ್ಕೆ ಭಿನ್ನವಾಗಿ.
Art
Manuscript
Music
Courtesy:
Transliteration
Sādhakayōgadinda nādabindukaḷeya huḍuki kaṇḍu kūḍabēkemba
āyāsayōgigaḷanēnembenayyā.
Nādabindukaḷeyoḷaḍagirda mahāprakāśava
gurumukhadinde karasthalakke tandu,
satkriyeyinde samavēdisi sarvāṅgaliṅgamayavāgi
sukhisuva bhēdavanariyade banduhōda
guruniran̄jana cannabasavaliṅgakke bhinnavāgi.
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿಸ್ಥಲ