Index   ವಚನ - 320    Search  
 
ಅಲಕ್ಷ ಅನಾಮಯ ಅಖಂಡ ನಿಲವು ಲಕ್ಷಕ್ಕೆ ಬಂದು ನಿಂದಲ್ಲಿ ನಿರ್ಗಮನ ನಿರ್ಮಾಯ ನಿಸ್ಸೀಮದಿರವು ಸೀಮೆಗೊಂಡಿತ್ತು ನೋಡಾ. ಕಣ್ಣಿಗೆ ನಿಲಿಕದಾಟ, ಹಣ್ಣಿತು ಮೂರುಲೋಕದೊಳಗೆ ಒಳಗೊಳಗಿನಾಟ ಬಳಿವಿಡಿದು ಬಂದು ಉಭಯಕ್ಕಾವರಿಸಿ ಗಮಿಸುವಲ್ಲಿ ಅಂತು ಇಂತುಯೆನಲುಂಟೆ? ಜಡ ಅಜಡಯೆನಲುಂಟೆ ಜಾತಾದಿ ಸಕಲ ತೃಣಾಗ್ನಿ? ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ ಅನುಸರಣಿತಮಾದಿತ್ಯ.