Index   ವಚನ - 328    Search  
 
ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ ಗುರುದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಲಿಂಗವ ಕಂಡು ಲಿಂಗದಲ್ಲಿ ಅನುಸರಣೆಯ ಮಾಡಿದರೆ ಲಿಂಗದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಜಂಗಮವ ಕಂಡು ಜಂಗಮದಲ್ಲಿ ಅನುಸರಣೆಯ ಮಾಡಿದರೆ ಜಂಗಮದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಪ್ರಸಾದವ ಕಂಡು ಪ್ರಸಾದದಲ್ಲಿ ಅನುಸರಣೆಯ ಮಾಡಿದರೆ ಪ್ರಸಾದದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಶರಣಭಕ್ತರ ಕಂಡು ಶರಣಭಕ್ತರಲ್ಲಿ ಅನುಸರಣೆಯ ಮಾಡಿದರೆ ಶರಣ ಭಕ್ತದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ ಗುರುನಿರಂಜನ ಚೆನ್ನಬಸವಲಿಂಗ ಸಾಕ್ಷಿಯಾಗಿ.