ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು
ಆ ವೀರಸ್ಥಲದಲ್ಲಿ ಧರಿಸಿಪ್ಪ
ಅನುಪಮ ವೀರಮಾಹೇಶ್ವರನ ನಡೆಯಲ್ಲಿ ತೋರುವುದು,
ನುಡಿಯಲ್ಲಿ ತೋರುವುದು,
ಹಿಡಿವಲ್ಲಿ ಕಾಣುವುದು, ಕೊಡುವಲ್ಲಿ ಕಾಂಬುವುದು,
ಕೊಂಬಲ್ಲಿ ಕಾಣುವುದು,
ಬರುವಲ್ಲಿ ತೋರುವುದು, ಹೋಗುವಲ್ಲಿ ತೋರುವುದು
ಗುರುನಿರಂಜನ ಚನ್ನಬಸವಲಿಂಗವು ತಾನೇ ನಿರುತವಾಗಿ.
Art
Manuscript
Music
Courtesy:
Transliteration
Akhaṇḍa prakāśālaya brahmavanarasikoṇḍu
ā vīrasthaladalli dharisippa
anupama vīramāhēśvarana naḍeyalli tōruvudu,
nuḍiyalli tōruvudu,
hiḍivalli kāṇuvudu, koḍuvalli kāmbuvudu,
komballi kāṇuvudu,
baruvalli tōruvudu, hōguvalli tōruvudu
guruniran̄jana cannabasavaliṅgavu tānē nirutavāgi.
ಸ್ಥಲ -
ಮಾಹೇಶ್ವರನ ಐಕ್ಯಸ್ಥಲ