Index   ವಚನ - 342    Search  
 
ನಿತ್ಯಾನಂದಸಂವಿತ್ಪ್ರಭಾಮೂರ್ತಿಯಾದ ಸತ್ಯಸ್ಥಲಾಶ್ರಯದಲ್ಲೊಪ್ಪುವ ಸದ್ಗುರುವರನಾಜ್ಞೆವಿಡಿದಾಚರಿಸುವ ಸಗುಣನಿರ್ಗುಣಸನ್ನಿಹಿತ ಸದಮಲಾನಂದ ಪ್ರಸಾದಿಯ ವೇಷವ ಹೊತ್ತು ನಡೆವಣ್ಣಗಳಿರಾ, ನಿಮ್ಮ ನಡೆಯೊಳು ತಪ್ಪಿ ನಡೆಯಬೇಡಿರಿ, ನಿಮ್ಮ ನುಡಿಯೊಳು ತಪ್ಪಿ ನುಡಿಯಬೇಡಿರಿ, ನಿಮ್ಮ ಭಕ್ತಿಯಲ್ಲಿ ಬೆರಸಬೇಡಿರಿ; ನಿಮ್ಮ ಜ್ಞಾನದಲ್ಲಿ ಕಲಸಬೇಡಿರಿ, ನಿಮ್ಮ ವಿರಾಗತೆಯಲ್ಲಿ ಅನುಸರಿಸಬೇಡಿರಿ, ನೂರು ವರುಷ ಬಾಳಿ ನರಕವನುಂಬುವದಕಿಂತ, ಒಂದೈದುದಿವಸ ಅಹುದಹುದೆನಿಸಿ ಗುರುನಿರಂಜನ ಚನ್ನಬಸವಲಿಂಗದಂಗವಾಗಿ ಅಮಲಪ್ರಸಾದಿಯೆನಿಸಿಕೊಂಬುವುದು ಕಾಣಾ.