Index   ವಚನ - 356    Search  
 
ಮದಮಲದ ಸೋಂಕನಳಿದ ಸದಮಲಪ್ರಸಾದಿ ಸಾವಧಾನಮುಖಸನ್ನಿಹಿತನಾಗಿ, ನಡೆನುಡಿಯೊಳೊಪ್ಪಿ ಚರಿಸುವನಲ್ಲದೆ ಆ ಮದಜಡದೇಹಿಗಳಂತೆ ಅರಿವಿನ ಬೆಳಗು ಮರೆದು ಮನವರಿದಂತೆ ಕಾಯ ಪ್ರಾಣವ ಕಂಡು ಸುಖಿಸಿಕೊಂಬುವನಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಜಡಾನಂದಮುಖಿ.