Index   ವಚನ - 365    Search  
 
ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ ದೇಶ ದೇಶವ ತಿರುಗಿ ಆಸೆಯೆಂಬ ಅದ್ಭುತ ಅಂಗಗೊಂಡು ಹೇಸಿಕೆಯೊಳು ಬಿದ್ದೇಳದ ಮಕ್ಷುಕನಂತೆ ಮಲಬದ್ಧ ಮನುಜರ ಬೋಧಿಸಿ ಕಾಡಿ ಕರೆಕರೆಸಿ, ಕಾಸಾದಿ ದ್ರವ್ಯವ ಕೊಂಡು ಬಂದು ಹಾಸಿ ಹಬ್ಬಕಿಕ್ಕಿ, ನಾಮಾಡಿದೆನೆಂಬ ನಾಯಿಯ ತೇಜವ ಹೊತ್ತು ತೊಳಲುವ ತಥ್ಯ ಭಂಡರ ಸೋಗಿಗೆ ಸೊಗಸರಯ್ಯಾ ನಿಮ್ಮ ಭಕ್ತರು ಗುರುನಿರಂಜನ ಚನ್ನಬಸವಲಿಂಗಾ.