ಭಿಕ್ಷಕ್ಕೆ ಬಂದಾ ಚರಮೂರ್ತಿಗಳ ಕಂಡು
ಕುಕ್ಷಿಯಲ್ಲಿ ಮರಗುವ ಯಕ್ಕಲನರಕಿಗಳಿಗೆತ್ತಣ ಉಪದೇಶವಯ್ಯಾ?
ಸುತ್ತಿರ್ದ ಪ್ರಪಂಚಕ್ಕೆ ಸವೆದು ಕರ್ತುಗಳಿಗೆ ಅರೆಕಾಸು ಸವೆಯದೆ
ನಾವು ನಿತ್ಯಭಕ್ತರೆಂದರೆ ಒತ್ತಿ ಹಾಕುವರು ಬಾಯಲ್ಲಿ ಹುಡಿಯಯ್ಯಾ
ಯಮನವರು
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ
ದುರ್ಮುಖಿಗಳೆಂದು.
Art
Manuscript
Music
Courtesy:
Transliteration
Bhikṣakke bandā caramūrtigaḷa kaṇḍu
kukṣiyalli maraguva yakkalanarakigaḷigettaṇa upadēśavayyā?
Suttirda prapan̄cakke savedu kartugaḷige arekāsu saveyade
nāvu nityabhaktarendare otti hākuvaru bāyalli huḍiyayyā
yamanavaru
guruniran̄jana cannabasavaliṅgakke dūravāda
durmukhigaḷendu.