ಪ್ರಸಾದಿಯಂಗದಲ್ಲಿ ಮೃದುಕಠಿಣ
ಸೀತೋಷ್ಣ ಸುಖಕ್ಕೆಳಸುವ
ರತಿಮೋಹವುಂಟೆ? ಇಲ್ಲ.
ಅದೇನು ಕಾರಣ, ಜಂಗಮಲಿಂಗಕ್ಕಂಗವಾದಕಾರಣ.
ಪ್ರಸಾದಿಯ ಮನದಲ್ಲಿ ಷಡುರಸರುಚಿ ಸೌಖ್ಯಕ್ಕೆ ಇಚ್ಛೈಸುವ
ವಿಷಯ ಮೋಹವುಂಟೆ? ಇಲ್ಲ.
ಅದೇನು ಕಾರಣ, ಗುರುಲಿಂಗಕ್ಕಂಗವಾದಕಾರಣ.
ಪ್ರಸಾದಿಯ ಭಾವದಲ್ಲಿ ಷಡುತೃಪ್ತಿಯ ಸೌಖ್ಯದ ಗ್ರಾಹಕತ್ವವುಂಟೆ?
ಇಲ್ಲ. ಅದೇನು ಕಾರಣ, ಮಹಾಲಿಂಕ್ಕಂಗವಾದಕಾರಣ.
ಇಂತು ಅಂಗ ಮನ ಭಾವದಿಚ್ಛೆಯನಳಿದುಳಿದ
ನಿರ್ಮಲಪ್ರಸಾದಿಯಲ್ಲದೆ
ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತನಾಗಬಾರದು.