Index   ವಚನ - 410    Search  
 
ಪಡೆದುಂಬ ಕಾಲಕ್ಕೆ ಒಡೆಯರು ಬಂದರೆ ಓರೆಮುಖವಾಗಿ ನಡೆವ ಘೋರಪಶುಗಳನೇನೆಂಬೆನಯ್ಯಾ. ತನ್ನಿಷ್ಟದ ಕಳೆಯನರಿಯದೆ ಅನ್ಯಕ್ಕೆ ತಲೆಯಿಟ್ಟು ಅರ್ಥವ ಸವೆಸಿ ಭಂಗಬಟ್ಟು ಭವಕ್ಕೆ ಬೀಳುವ ಕುನ್ನಿ ಮಾನವರ ನಿಷ್ಠೆಯ ನೋಡಾ. ಮುಂದೆ ಭವಭವಕ್ಕೆಡೆಯಾಡುವ ಕಷ್ಟ ನೋಡಾ ಗುರುನಿರಂಜನ ಚನ್ನಬಸವಲಿಂಗವನರಿಯದೆ.