ಹಿಂದನರಿಯದೆ, ಮುಂದನರಿಯದೆ, ಈಗನರಿಯದೆ,
ಆಗಿ ಬಂದವರೆಂದು ಅರಿದು ಮರೆದು
ಹರಿದು ಮಾಡುವ ಕುರಿಗಳಿಗೆತ್ತಣ ದೇವತ್ವವಯ್ಯಾ!
ಬರಿಯ ಭ್ರಾಂತಿಗಳಿಗೆತ್ತಣ ಭಕ್ತತ್ವವಯ್ಯಾ!
ಮಾಡಲರಿಯದೆ ಮಾಡುವರು, ನೀಡಲರಿಯದೆ ನೀಡುವರು.
ಬೇಡಿ ಉಣಲರಿಯದೆ ಬೇಡಿ ಉಂಬುವ ನಾಡಮಾನವರ
ನಡೆನುಡಿಗತ್ತತ್ತಲಾಗಿರ್ದ ನಮ್ಮ
ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Hindanariyade, mundanariyade, īganariyade,
āgi bandavarendu aridu maredu
haridu māḍuva kurigaḷigettaṇa dēvatvavayyā!
Bariya bhrāntigaḷigettaṇa bhaktatvavayyā!
Māḍalariyade māḍuvaru, nīḍalariyade nīḍuvaru.
Bēḍi uṇalariyade bēḍi umbuva nāḍamānavara
naḍenuḍigattattalāgirda nam'ma
guruniran̄jana cannabasavaliṅga.
ಸ್ಥಲ -
ಪ್ರಸಾದಿಯ ಮಾಹೇಶ್ವರಸ್ಥಲ