ಅನುಪಮಲಿಂಗದಂಗ ಶರಣಂಗೆ
ಅನುಸರಣೆಯೇನೂ ಇಲ್ಲವಯ್ಯ.
ಅವಿರಳ ಕ್ರಿಯೆಯಲ್ಲಿ ಜಡಮಿಶ್ರವಿರಹಿತನಾಗಿ
ಕಡುಗಲಿವೀರಪ್ರಸಾದಿಯಯ್ಯಾ.
ವಿಪರೀತ ಜ್ಞಾನವಳಿದು ಸುಜ್ಞಾನಸಮೇತ
ಸಾರಾಯ ಸಂಗಸುಖಿಯಯ್ಯಾ.
ಅಭಿನ್ನ ಪ್ರಸಾದಿ ತನ್ನ ಅಪ್ರತಿಮಾಚಾರದಲ್ಲಿ
ದ್ವೈತಾದ್ವೈತಚರಿಯ ಸುಳಿಯಲೆಸೆದರ್ಪಿತ
ಅಸಮಘನಮಹಿಮನಯ್ಯಾ.
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಅಗಮ್ಯಪ್ರಸಾದಿಯಯ್ಯಾ.
Art
Manuscript
Music
Courtesy:
Transliteration
Anupamaliṅgadaṅga śaraṇaṅge
anusaraṇeyēnū illavayya.
Aviraḷa kriyeyalli jaḍamiśravirahitanāgi
kaḍugalivīraprasādiyayyā.
Viparīta jñānavaḷidu sujñānasamēta
sārāya saṅgasukhiyayyā.
Abhinna prasādi tanna apratimācāradalli
dvaitādvaitacariya suḷiyalesedarpita
asamaghanamahimanayyā.
Guruniran̄jana cannabasavaliṅgadalli
agamyaprasādiyayyā.
ಸ್ಥಲ -
ಪ್ರಸಾದಿಯ ಮಾಹೇಶ್ವರಸ್ಥಲ