Index   ವಚನ - 438    Search  
 
ಹೆಂಡರ ಮಕ್ಕಳ ಸಲಹಲಾರದೆ ಒಂದು ನೆವದಿಂದೆ ವೈರಾಗ್ಯ ತಲೆಗೇರಿ ಲೋಚು ಬೋಳು ದಿಗಂಬರ ವೇಷವ ತಾಳಿ ದಿಗ್ದೇಶವ ತಿರುಗುತ್ತ ತಿನಿಸು ಮೈಯುಂಡು ಆಸೆ ವಿಷಯವಂಕುರಿಸಿ ಕೊಡುವ ಅಳಿಭಕ್ತರನರಸುತ್ತ ತಲೆಹುಳಿತ ಶುನಕನಂತೆ ಮನೆಮನೆಯ ಶೋಧಿಸುತ ಕನಕ ಕಾಮಿನಿ ವಸ್ತ್ರಕ್ಕತಿಮೋಹವೆರಸಿ ಉಗಿದುಚ್ಛಿಷ್ಟದೊಳು ಬಿದ್ದು ಹೊರಳ್ಯಾಡುವ ಸೂಕರಾಳಿಗೆ ಇನ್ನೆತ್ತಣ ಒಡೆತನವಯ್ಯಾ ಗುರುನಿರಂಜನ ಚನ್ನಬಸವಲಿಂಗಾ.