Index   ವಚನ - 439    Search  
 
ಕಾಲಲ್ಲಿ ತಲೆಯ ಕಟ್ಟಿಕೊಟ್ಟು ಪಡೆಯಬಲ್ಲರೆ ಶರಣ. ತಲೆಯಲ್ಲಿ ಕಾಲ ಕಟ್ಟಿಕೊಟ್ಟು ಪಡೆಯಬಲ್ಲರೆ ಶರಣ. ಈ ಉಭಯಗೂಡಿ ಕೊಟ್ಟು ಪಡೆಯಬಲ್ಲರೆ ಶರಣ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಡೆದು ಮೂಲವ ಕಿತ್ತೊಗೆಯಬಲ್ಲರೆ ನಿಜಶರಣ.