ಹಿಂದುಮುಂದಿನ ಸಂದುಸಂಶಯ ಮುಂದ ತೋರದೆ
ತೋರಿ ಸುಖಿಸುವ ಶರಣ.
ಬಂದ ಸುಖದುಃಖವ ಹೆಚ್ಚಿ ನೊಂದದ ಸಂದಸುಖಿ ಶರಣ.
ಬೆಂದ ಒಡಲಿಗೆ ಹುಸಿದು ಮಸಿಹೂಸಿ ಮರೆದ ಹಸಿವರತು ಕೊಂಬಸುಖಿ ಶರಣ.
ಹೊರಗೊಳಗಿನ ನಡೆಯ ಹರಿದು ಹಾರದ ಸುಖಿ ಶರಣ.
ಗುರುಲಿಂಗಜಂಗಮಪ್ರಸಾದ ಸಮರಸವರಿದು ಮರೆಯದೆ ಮಾಟಸುಖಿ ಶರಣ.
ಗುರುನಿರಂಜನ ಚನ್ನಬಸವಲಿಂಗದಂಗವಾಗಿ
ಸುಖವಿತ್ತುಕೊಂಬ ಪ್ರಸಾದಿ ಶರಣ.
Art
Manuscript
Music
Courtesy:
Transliteration
Hindumundina sandusanśaya munda tōrade
tōri sukhisuva śaraṇa.
Banda sukhaduḥkhava hecci nondada sandasukhi śaraṇa.
Benda oḍalige husidu masihūsi mareda hasivaratu kombasukhi śaraṇa.
Horagoḷagina naḍeya haridu hārada sukhi śaraṇa.
Guruliṅgajaṅgamaprasāda samarasavaridu mareyade māṭasukhi śaraṇa.
Guruniran̄jana cannabasavaliṅgadaṅgavāgi
sukhavittukomba prasādi śaraṇa.