Index   ವಚನ - 451    Search  
 
ಕತ್ತಲೆ ಬೆಳಗಿನೊಳಿಪ್ಪ ಮಿಥ್ಯಮಾರಿಯ ಮಕ್ಕಳಿಗೆ ನಿತ್ಯರೆಂಬ ನುಡಿ ಮತ್ತೆಲ್ಲಿಹದೊ? ಬಗೆ ಬಗೆ ಸೋಗ ತೊಟ್ಟು ನಗುತ್ತಲಳುತ್ತ ಶರಧಿಯೊಳು ನೀರಾಟವನಾಡುವವರು ಮಹಾನಂದದಲ್ಲೊಪ್ಪುವ ಮಹಾಲಿಂಗಪ್ರಸಾದಸುಖವನವರೆತ್ತಬಲ್ಲರು ಗುರುನಿರಂಜನ ಚನ್ನಬಸವಲಿಂಗಪ್ರಸಾದಿಯೈಕ್ಯರಲ್ಲದೆ.