Index   ವಚನ - 458    Search  
 
ಲಿಂಗವನರಿವ ಸಂಗವಿರಹಿತರು ಅನುಭಾವಿಗಳ ಸುಳುಹನರಸಬೇಕು. ಶಿವಶರಣರ ಸಂಗವ ಹಾರೈಸಬೇಕು. ಸದ್ಭಕ್ತರಲ್ಲಿ ಪ್ರೇಮರಸವಿರಬೇಕು. ತನು ಮನ ಪ್ರಾಣದ ಗುಣವನಳಿದಿರಬೇಕು. ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಕ್ತಿಬೆಳಗ ಕೂಡಿರಬೇಕು.