Index   ವಚನ - 469    Search  
 
ಪ್ರಾಣಲಿಂಗದ ಬೆಳಗ ಕಂಡೆವೆಂದು ಕಣ್ಣಸಿಕ್ಕಿಸಿ ಕಷ್ಟದಿಂದೆ ಕಳೆಯನೆಬ್ಬಿಸಿ ಕಳೆದುಳಿವ ಖಂಡಿತರು ಪ್ರಾಣಲಿಂಗ ಸಂಬಂಧಿಗಳೆಂತಪ್ಪರಯ್ಯಾ? ಕಾಯದ ಕರ್ಮವಳಿಯದೆ, ಮನದ ಮಲಿವನ ತೊಳೆಯದೆ, ಭಾವದ ಜಂಜಡ ಹರಿಯದೆ ಪ್ರಾಣಲಿಂಗಸಂಬಂಧಿಗಳೆಂತಪ್ಪರಯ್ಯಾ ಎಂತಿರ್ದಂತೆ ಭ್ರಾಂತಿ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಾನುಭಾವ ಸರಸವಲ್ಲ ಕಾಣಾ.