Index   ವಚನ - 481    Search  
 
ಆರೆತ್ತಿನ ಹರದಂಗೆ ನೂರೊಂದು ಬಗೆಯಲ್ಲಿ ತೆರಿಗೆಯ ಕೊಳುತಿರ್ದನೊಬ್ಬ ರಾಜ. ಐವತ್ತಾರು ದೇಶದೊಳಗೆ ಹೆಂಡರ ಕುಶಲತ್ವದಿಂದೆ ಹರದ ಬಾಳಿ, ಹಿರಿಯ ಮನೆಯೊಳಗೆ ಚರಣಗಳನೂರಿ ನೆರೆಯಲು ಸಂಬಂಧವಾಯಿತ್ತು ಪ್ರಾಣಲಿಂಗ ಗುರುನಿರಂಜನ ಚನ್ನಬಸವಲಿಂಗದಲ್ಲಿ.