Index   ವಚನ - 490    Search  
 
ಹೇಮಾದ್ರಿಯ ನಡುವೆ ಹೆರೆಹಿಂಗದಿರ್ದ ಅನಂತಕೋಟಿ ಸೂರ್ಯಪ್ರಕಾಶವ ಕಂಡೆನಯ್ಯಾ. ರಜತಾದ್ರಿಯನಡುವೆ ಅಚಲವಾಗಿರ್ದ ಅನಂತಕೋಟಿ ಚಂದ್ರಪ್ರಕಾಶವ ಕಂಡೆನಯ್ಯಾ. ಮಂದರಾದ್ರಿಯನಡುವೆ ಅಗಲಬಾರದ ಅವಿರಳವಾದ ಅಗ್ನಿಪ್ರಕಾಶವ ಕಂಡೆನಯ್ಯಾ. ಈ ತ್ರಿವಿಧಪ್ರಕಾಶದೊಬ್ಬುಳಿಯೊಳಗೆ ಗುರುನಿರಂಜನ ಚನ್ನಬಸವಲಿಂಗನ ಕಂಡು ತನುಮನಭಾವ ಬೆಚ್ಚಿ ನಮೋ ನಮೋ ಎನುತಿರ್ದೆನಯ್ಯ.