Index   ವಚನ - 493    Search  
 
ಹೊರಗಿಲ್ಲದ ಒಳಗಿಲ್ಲದ ಕೆಳಗಿಲ್ಲದ ಮೇಲಿಲ್ಲದ ಹಿಂದಿಲ್ಲದ ಮುಂದಿಲ್ಲದ ತೆರಹಿಲ್ಲದ ಲಿಂಗವ ಪರಿಪರಿಯಿಂದ ಕಂಡು ಕೂಡಿದೆನೆಂಬ ಮಂಡೆಹೀನ ಮಲಸಂಯುಕ್ತ ಮಾನವರ ನೋಡಾ! ಪಲವು ಕಷ್ಟ ಅಭ್ಯಾಸದಿಂದ ಗೆಲವುಗೆಟ್ಟು, ಆಲಿಯೇರಿಸಿ ಆಯಾಸಬಟ್ಟು ಅರ್ಕೇಂದು ವಹ್ನಿಯಂತೆ ಹೊಳವುದೋರಿ ಹೋದಲ್ಲಿ ನಾವು ಶಿವನ ಕಂಡೆವೆಂದು ನುಡಿದುಕೊಂಬ ವಾಗದ್ವೈತ ಭವಪ್ರೇರಕರ ಭಾವಕ್ಕೆ ಗುರುನಿರಂಜನ ಚನ್ನಬಸವಲಿಂಗ ಪ್ರಕಾಶವು ತೋರಬಾರದು.