Index   ವಚನ - 498    Search  
 
ಅರಿಯಲಿಲ್ಲದ ಬೆಳಗ ಅರಿದುಕಂಡೆನು ಎನ್ನ ಕಂಗಳ ಮುಂದೆ. ಮರೆಯಲಿಲ್ಲದ ಬೆಳಗ ಮರೆದುಕಂಡೆನು ಎನ್ನ ಮನದ ಮುಂದೆ. ಕರೆದು ಕಳುಹಲಿಲ್ಲದ ಬೆಳಗ ಕಳುಹಿ ಕರೆಯದೆ ಕಂಡೆನು ಎನ್ನ ಭಾವದ ಮುಂದೆ. ಕಾರ್ಯಕಾರಣವಿರಹಿತ ಗುರುನಿರಂಜನ ಚನ್ನಬಸವಲಿಂಗವೆಂಬ ಬೆಳಗ ಕಾರ್ಯಕಾರಣದಿಂದೆ ಕಂಡೆನು.