ಸತ್ತುಚಿತ್ತಾನಂದ ನಿತ್ಯಪರಿಪೂರ್ಣ
ಅಖಂಡಮಯ ಪರಶಿವನ ಕಿಂಚಿತ್ಗತಿಮತಿಗಳು,
ಸಂಚಿತಾದಿ ಸಂಬಂಧಕರ್ಮವಿಡಿದ ಮನಭಾವದಿಂದೆ
ಕಂಡರಿದೆವೆಂದು ಹೇಳುವ ಕಲ್ಪಿತವಂತಿರಲಿ,
ಕಂಗಳಮುಂದೆ ಮಂಗಳಮಯವಾಗಿ ಮೂರ್ತಿಗೊಂಡಿಪ್ಪ
ಲಿಂಗವನಂಗಮನಪ್ರಾಣವಾಗಿ ಭಾವಬೆರೆಸಿ
ಮಹಾನುಭಾವವಾದ ಮಹಾಮಹಿಮನೆ ಪ್ರಾಣಲಿಂಗಿ,
ಉಳಿದವರೆಲ್ಲ ಅಧಮರು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sattucittānanda nityaparipūrṇa
akhaṇḍamaya paraśivana kin̄citgatimatigaḷu,
san̄citādi sambandhakarmaviḍida manabhāvadinde
kaṇḍaridevendu hēḷuva kalpitavantirali,
kaṅgaḷamunde maṅgaḷamayavāgi mūrtigoṇḍippa
liṅgavanaṅgamanaprāṇavāgi bhāvaberesi
mahānubhāvavāda mahāmahimane prāṇaliṅgi,
uḷidavarella adhamaru kāṇā
guruniran̄jana cannabasavaliṅgā.