Index   ವಚನ - 515    Search  
 
ಪ್ರಾಣಲಿಂಗವನು ಮಾಣದೆ ನೋಡಿ, ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ. ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ ಚಂದ ಚಂದದ ನಡೆಯೊಳೆಸೆಯುತ, ನುಡಿಯೊಳೊಂದಿದ ಬಿಂದು ಅಲಸದೆ ಹಿಂದು ಹಿಂದನು ಮುಂದು ಮುಂದನು ತಂದು ಆರಾಧಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ.