ಶರಣ ತನ್ನ ಪ್ರಾಣಲಿಂಗಪೂಜೆಯ ಮಾಡುವಲ್ಲಿ
ತನು ಮನ ಪ್ರಾಣ ನಷ್ಟವಾಗಲೆಂದು ಕಷ್ಟಬಟ್ಟವನಲ್ಲ.
ಇಂದ್ರಿಯವಿಷಯನಳಿಯಬೇಕೆಂದು ಕಳೆಗುಂದಿ ಬಳಲುವನಲ್ಲ.
ವಾಗ್ಜಾಲವುಡುಗಲೆಂದು, ದುರ್ಭೂತಪ್ರವೇಶ ಮೌನಿಯಲ್ಲ.
ಕಣ್ಣು ಮುಚ್ಚಿ ಧ್ಯಾನವ ಮಾಡುವನಲ್ಲ.
ಸಂಕಲ್ಪ ಕಳವಳವ ಕಳೆದುಳಿದ ನಿಃಸಂಕಲ್ಪ ನಿರ್ವಾಣಿ ನೋಡಾ.
ಸತ್ಕ್ರಿಯಾ ಸುಜ್ಞಾನ ಸಮರಸಪ್ರಕಾಶ ಪರಿಪೂರ್ಣ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Śaraṇa tanna prāṇaliṅgapūjeya māḍuvalli
tanu mana prāṇa naṣṭavāgalendu kaṣṭabaṭṭavanalla.
Indriyaviṣayanaḷiyabēkendu kaḷegundi baḷaluvanalla.
Vāgjālavuḍugalendu, durbhūtapravēśa mauniyalla.
Kaṇṇu mucci dhyānava māḍuvanalla.
Saṅkalpa kaḷavaḷava kaḷeduḷida niḥsaṅkalpa nirvāṇi nōḍā.
Satkriyā sujñāna samarasaprakāśa paripūrṇa
guruniran̄jana cannabasavaliṅgadalli.
ಸ್ಥಲ -
ಪ್ರಾಣಲಿಂಗಿಯ ಭಕ್ತಸ್ಥಲ