Index   ವಚನ - 530    Search  
 
ಆದ್ಯರವಚನ ಸಾಧ್ಯವಾಯಿತೆಂದು ಮದ್ದ ತಿಂದು ಕುಳಿತ ಮನುಜನಂತೆ, ಇರುಳುಗಳೆದ ಗೂಗೆಯಂತೆ, ಮೂಲಿ ಗೊಂದಿ ಗುಡ್ಡ ಗುಹ್ಯಂಗಳ ಸೇರಿ ಮದಡು ತಿಳಿದು ಹಗಲುಗಳೆದು ಉದರ ಬಗೆವಂತೆ, ದುರ್ವೈರಾಗ್ಯವುಳಿದು, ಮೊದಲ ಸಂದು ಮುಂದೆ ಹೋಗುವ ತುಡುಗುಣಿ ಗುಹ್ಯವಾದನುಭಾವದ ಕುರುಹನವನೆತ್ತಬಲ್ಲನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.