ಉರಿಯೊಳು ಮುಳುಗಿದ ತಾವರೆಯ
ಕುಸುಮವ ತಂದು ಮೂಸಿದರೆ
ಸದ್ವಾಸನೆಯ ತೋರಲರಿಯದು.
ಗುರೂಪದೇಶವಾದ ಹೃದಯಕಮಲವನು
ತಾಪತ್ರಯ ಉರಿಯೊಳು ಹಾಕಿದಾತನ ಹೃದಯದಲ್ಲಿ,
ನಿಜಾನುಭಾವದ ವಾಸನೆ ಶಿವಶರಣರಿಗೆ ತೋರಲರಿಯದು
ಗುರುನಿರಂಜನ ಚನ್ನಬಸವಲಿಂಗಕ್ಕೆ ಅಯೋಗ್ಯ ಕಾಣಾ.
Art
Manuscript
Music
Courtesy:
Transliteration
Uriyoḷu muḷugida tāvareya
kusumava tandu mūsidare
sadvāsaneya tōralariyadu.
Gurūpadēśavāda hr̥dayakamalavanu
tāpatraya uriyoḷu hākidātana hr̥dayadalli,
nijānubhāvada vāsane śivaśaraṇarige tōralariyadu
guruniran̄jana cannabasavaliṅgakke ayōgya kāṇā.
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲ