Index   ವಚನ - 566    Search  
 
ಅನಾದಿಯ ಬೆಳಗು ಆದಿಯಲ್ಲುದಯವಾಗಿ ಆದಿಯ ಕುಳಗತಿಯ ಕೆಡಿಸಿತ್ತು ನೋಡಾ! ಮತ್ತಾದಿಯ ಮುಖವನರಿಸಿತ್ತು. ಮಥನದಿಂದಾಗಿ ಬಂದು ಎನ್ನ ಕಂಗಳ ಮುಂದೆ ನಿಂದು, ಕಾರಣನಾಗಿ ಕಾರ್ಯದಿಂದೆ ಸಕಲ ಸಂಜನಿತ ಸುಖಮಯ ವ್ಯಾಪಾರಗೊಂಡು ತನ್ನ ಮೂಲದ್ರವ್ಯಪ್ರಕಾಶದೊಳಪ್ಪಿಕೊಂಡನು ಎನ್ನ ಗುರುನಿರಂಜನ ಚನ್ನಬಸವಲಿಂಗ.