Index   ವಚನ - 579    Search  
 
ಉದಕದಲ್ಲುದಯಿಸಿದ ಪ್ರಾಣಿಗಳು ಉದಕದಲ್ಲಿ ಸ್ಥಿತಿ, ಉದಕದಲ್ಲಿ ಮರಣವಲ್ಲದೆ ಬೇರೆ ಹೇಳಲುಂಟೆ? ದುರ್ಮಾಯಾ ಸಂಸಾರದಲ್ಲಿ ಹುಟ್ಟಿದ ಅನಿತ್ಯಜನರಿಂಗೆ ಆ ದುರ್ಮಾಯಾ ಸಂಸಾರದಲ್ಲಿಯೇ ಸ್ಥಿತಿ. ಆ ದುರ್ಮಾಯಾ ಸಂಸಾರದಲ್ಲಿಯೇ ಮರಣವಲ್ಲದೆ, ಗುರುಕರದಲ್ಲುದಿಸಿ ಸರ್ವಾಚಾರಸಂಪತ್ತೆಂಬಾಚರಣೆ ಚರಿತೆಯಲ್ಲಿ ಬೆಳೆದು ಪರಬ್ರಹ್ಮ ಪರದಲ್ಲೇ ನಿರ್ವಯಲೆಂಬ ನಿಜಶರಣಪದವೆಂತು ಸಾಧ್ಯವಪ್ಪುದು ಹೇಳಾ ಗುರುನಿರಂಜನ ಚನ್ನಬಸವಲಿಂಗಾ?