Index   ವಚನ - 581    Search  
 
ನಡುಗಡಲಲ್ಲಿರ್ಪ ಪಾಷಾಣಕ್ಕೆ ಸೂರ್ಯನ ಧ್ಯಾಸವುಂಟೆ ಧರೆಯ ಪಾಷಾಣಕ್ಕಲ್ಲದೆ? ಕಡುಜಡಸಂಸಾರಮಧ್ಯದಲ್ಲಿರ್ಪ ಕಲುಹೃದಯಮನುಜಂಗೆ ಚಿತ್ಶರಣನಾಚಾರಪದ ಸಾಧ್ಯವಪ್ಪುದೆ ಚಿತ್ಕಾಯ ಸುಜ್ಞಾನ ಕಾರುಣ್ಯಹೃದಯಗಲ್ಲದೆ? ಗುರುನಿರಂಜನ ಚನ್ನಬಸವಲಿಂಗಾ.