ಸಕಲನಿಃಕಲಸನ್ನಿಹಿತ ಸದಮಲಾನಂದ ಶರಣಂಗೆ
ಆವ ಮಾಯಾ ಅವಿದ್ಯೋಚ್ಛಿಷ್ಟಸುಖಿಗಳುಲುಹು
ತಾಗಲರಿಯದಿರ್ದವು.
ಅದೆಂತೆನ್ನಲು, ಉರಿಗೆ ನೊರಜು, ಕೆಂಡಕ್ಕೆ ಗೊರಲೆ,
ಪುಣ್ಯಕ್ಕೆ ಪಾಪ ಸೋಂಕದಂತೆ,
ನಾದ ಬಿಂದು ಕಲಾನಿರಂಜನ ತಾನಾದ ನೋಡಾ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Sakalaniḥkalasannihita sadamalānanda śaraṇaṅge
āva māyā avidyōcchiṣṭasukhigaḷuluhu
tāgalariyadirdavu.
Adentennalu, urige noraju, keṇḍakke gorale,
puṇyakke pāpa sōṅkadante,
nāda bindu kalāniran̄jana tānāda nōḍā
guruniran̄jana cannabasavaliṅgadalli.