Index   ವಚನ - 596    Search  
 
ಕಾಣಬಾರದ ಕಳೆ ಕಣ್ಣಿಂಗೆ ಗೋಚರಿಸಿದಲ್ಲಿ ಕಳೆಯಬಾರದ ಕಲ್ಪನೆ ಕಳಚಿತ್ತು ನೋಡಾ. ಬರಬಾರದ ಬರವು ಬಂದು ನಿಂದಲ್ಲಿ. ಆಗಬಾರದ ಭೋಗ ಆದುದು ನೋಡಾ. ಹುಟ್ಟಬಾರದ ಹುಟ್ಟು ಹುಟ್ಟಿಬಂದುದಾಗಿ ನೆಟ್ಟನೆ ಬಂದು ಕೈಹಿಡಿದುದು ನೋಡಾ. ಆಡಬಾರದ ಆಟ ಬಂದುದಾಗಿ ಮಾಡಬಾರದ ಸ್ನೇಹ ಹೆಚ್ಚಿತ್ತು ನೋಡಾ. ಹೇಳಬಾರದ ಸುಖವು ಹೇಳಿ ಸಾರಿತ್ತಾಗಿ ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗ ತಾನೆ ಶರಣ ನೋಡಾ.