Index   ವಚನ - 600    Search  
 
ಆದಿಗುರುವಿನ ಕೈಯಿಂದೆ ಅನಾದಿಲಿಂಗವ ಪಡೆದವರೆಂದು ಭೇದಾಭೇದವನರಿಯದೆ ಸಾಧಿಸುವರು ತನುವಿಡಿದು ಇಂದ್ರಿಯ ಸುಖವ ; ಭೇದಿಸುವರು ಮನವಿಡಿದು ಕಾರಣದ ಸುಖವ ; ಆವೇದಿಸುವರು ಪ್ರಾಣವಿಡಿದು ವಿಷಯದ ಸುಖವ. ಇದು ಕಾರಣ ಗುರುವೆಲ್ಲಿಹದೋ! ಲಿಂಗವೆಲ್ಲಿಹದೋ! ಜಂಗಮವೆಲ್ಲಿಹದೋ! ಪ್ರಸಾದವೆಲ್ಲಿಹದೋ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಮುಕ್ತಿಯೆಲ್ಲಿಹದೋ!