Index   ವಚನ - 604    Search  
 
ಕಂಗಳಲ್ಲಿ ಹೆಜ್ಜೆ ಮೂಡಿ, ಹೆಜ್ಜೆಯಲ್ಲಿ ಕಂಗಳು ಮೂಡಿ, ಕಣ್ಣಿನಲ್ಲಿ ಕಂಗಳು ಮೂಡಿ, ಕಿವಿಯಲ್ಲಿ ಕಂಗಳು ಮೂಡಿ, ಮೂಗಿನಲ್ಲಿ ಕಂಗಳು ಮೂಡಿ, ನಾಲಿಗೆಯಲ್ಲಿ ಕಂಗಳು ಮೂಡಿ, ಮೈಯಲ್ಲಿ ಕಂಗಳು ಮೂಡಿ, ಕೈಯಲ್ಲಿ ನಲ್ಲನ ಬಿಗಿದು ಮುದ್ದಿಸಿ, ನೆರೆದು ಸುಖಿಸಬಲ್ಲಾತಂಗಲ್ಲದೆ ಶರಣಸ್ಥಲ ಸಾಮಾನ್ಯವೇ ಗುರುನಿರಂಜನ ಚನ್ನಬಸವಲಿಂಗಾ?