Index   ವಚನ - 616    Search  
 
ಹುಟ್ಟಿಬಂದ ಮನೆಯ ಸುಟ್ಟು ತಾಯಿಯ ಸಂಗ ಮಾಡಿದರೊಂದು ಕೂಸು ಹುಟ್ಟಿ ಕೈಯೊಳಗೆ ನಿಂದು ಮೈಯನೆಲ್ಲ ಮುಟ್ಟಿತ್ತು ಇದೇನು ಹೇಳಾ! ನಾ ನೋಡಿ ಹೆಣ್ಣಾಗಿ ಬಗೆಬಗೆಯಾಟದಿಂದೆ ಸೊಗಸು ತೋರಿದರೆ ನೆಲಮನೆಯೊಳಿಪ್ಪ ಬಳಿವಿಡಿಯೆ ಭೋಗವ ನೆಗಹಿ ತೋರಿದನು ಮೇಲುಮನೆಯಲ್ಲಿ ಗುರುನಿರಂಜನ ಚನ್ನಬಸವಲಿಂಗ.