Index   ವಚನ - 624    Search  
 
ತನ್ನ ತಾನರಿದು ಅನ್ಯವ ಮರೆದು ನಡೆಯಲ್ಲಿ ನುಡಿವೆರೆದು ನುಡಿಯಲ್ಲಿ ನಡೆವೆರೆದು, ಕಡೆಮೊದಲನೂಂಕಿ ನಡುವೆ ಕಳೆದುಳಿಸಿ ಬಳಿವಿಡಿವಲ್ಲಿ ಬಗೆಬಗೆಯ ಬಣತೆಯ ಸೊಗಸಿನಿಂದ ಕೂಡಬಲ್ಲ ಮಹಾಂತನೆ ಶರಣ ತಾನೆ ಗುರುನಿರಂಜನ ಚನ್ನಬಸವಲಿಂಗ.