Index   ವಚನ - 631    Search  
 
ನಿತ್ಯಾನಂದ ಶರಣ ಮಿಥ್ಯಸಂಸಾರದಲ್ಲಿ ಬಳಲುವನಲ್ಲ ನೋಡಾ. ತನುವಿರ್ದು ತನುವಿಲ್ಲ ಮನವಿರ್ದು ಮನವಿಲ್ಲ ಧನವಿರ್ದು ಧನವಿಲ್ಲ. ತನುಮನಧನವಿಡಿದು ಶರಣಸತಿ ಲಿಂಗಪತಿಯೆಂಬ ಭಾವವನು ತಲೆಯಲ್ಲಿ ಕಟ್ಟಿ ನಲಿನಲಿದಾಡುತಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಸುಖಿಯಾಗಿ.