Index   ವಚನ - 637    Search  
 
ಅಯ್ಯಾ, ನಿಮ್ಮ ಶರಣ ನಡೆವಲ್ಲಿ ಜಾಣನಯ್ಯಾ, ನುಡಿವಲ್ಲಿ ಜಾಣನಯ್ಯಾ, ಹಿಡಿವಲ್ಲಿ ಜಾಣನಯ್ಯಾ, ಕಡಿದ ಸುಖವೊಂದಾಗುವನ್ನಬರ, ಅದೆಂತೆಂದೊಡೆ, ಮೊಸರ ಕಡೆವ ನಾರಿಯು ನವನೀತ ಬರುವನ್ನಕ್ಕರ ಹಿಡಿವಲ್ಲಿ ಜಾಣೆ, ಕಡೆವಲ್ಲಿ ಜಾಣೆ, ತಿಳಿವಲ್ಲಿ ಜಾಣೆ, ಕೂಡಿ ಬಂದ ಬಳಿಕ ಕಾರ್ಯವಿಲ್ಲ ಕಾಣಾ ನಿಮ್ಮ ಶರಣಂಗೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.