Index   ವಚನ - 685    Search  
 
ನೋಡಲಿಲ್ಲದ ನುಡಿಸಲಿಲ್ಲದ ಕೂಡಲಿಲ್ಲದ ಲಿಂಗವ ನಾ ನೋಡಿ ಶರಣೆಂದು ಸುಖಿಸಿದೆ ನೋಡಾ. ಎನ್ನೊಡನೆ ನುಡಿಸಿ ಶರಣೆಂದು ಸುಖಮಯನಾದೆ ನೋಡಾ. ಎನ್ನೊಡನೆ ಕೂಡಿ ಶರಣೆಂದು ಪರಿಣಾಮಿಯಾದೆ ನೋಡಾ. ಗುರುನಿರಂಜನ ಚನ್ನಬಸವಲಿಂಗವನು ನಾನರಿಯದೆ ಶರಣೆಂದು ಪರಮಾನಂದ ಲೋಲುಪ್ತನಾದೆ ನೋಡಾ.