Index   ವಚನ - 694    Search  
 
ಒಳಹೊರಗೆ ತಂದು ಉಲಿದುರಿವ ಸಂಪತ್ತವನರಿವಡೆ ಹಿಂದಣ ಸಿರಿಸುಖಗಳಿಗಳವಲ್ಲ ಕಾಣಾ. ಹೊರಗೊಳಗೆ ತಂದು ಉಲಿದುರಿವ ಸಂಪತ್ತವನರಿವಡೆ ಹೋಗಿ ಬಂದಿರುವ ಪರಿಸುಖಿಗಳಿಗಳವಲ್ಲ ಕಾಣಾ. ಮತ್ತೆಂತೆಂದೊಡೆ, ಹಾಸಿದ ಶರಗ ಹಾಸದ ಭಾಷೆಬದ್ಧ ಭಾವಜ್ಞರರಿವರು ನೋಡಾ ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.