Index   ವಚನ - 713    Search  
 
ಅತ್ತಲರಿಯದೆ ಇತ್ತಲರಿಯದೆ ಸತ್ಯವಿಡಿದು ಸಂಗದನುವ ಸ್ಥಲಕ್ಕೆ ತಂದು ಹಿಂಗದಾಡಿದೆ ಹಿರಿಯರ ಮುಂದೆ, ನೋಡಿಯಾಡಿದೆ ಹಿರಿಯರ ಮುಂದೆ, ಕೂಡಿಯಾಡಿದೆ ಹಿರಿಯರ ಮುಂದೆ. ಹಿರಿಯರೆನ್ನವರಾಗಿ ಆಡಲಿಲ್ಲ ನೋಡಲಿಲ್ಲ ಕೂಡಲಿಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ.