Index   ವಚನ - 732    Search  
 
ಅಯ್ಯಾ, ಎನ್ನ ಮಂದಿರದಲ್ಲಿ ಬಸವಣ್ಣನ ಮಹಾನುಭಾವಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಎನ್ನ ಮಂದಿರದಲ್ಲಿ ಮಡಿವಾಳಯ್ಯನ ಚಿದ್ರಸಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಎನ್ನ ಮಂದಿರದಲ್ಲಿ ಚನ್ನಬಸವಣ್ಣನ ಚಿದ್ರೂಪಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಎನ್ನ ಮಂದಿರದಲ್ಲಿ ಸಿದ್ಧರಾಮಯ್ಯನ ಚಿತ್ಕಲಾಸೋಂಕಿನ ಶುದ್ಧಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಎನ್ನ ಮಂದಿರದಲ್ಲಿ ಪ್ರಭುದೇವರ ಚಿದಾನಂದಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಎನ್ನ ಮಂದಿರದಲ್ಲಿ ಅಜಗಣ್ಣನ ಮಹದಾನಂದಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ! ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ ಎನ್ನ ಮಂದಿರದಲ್ಲಿ ತೆರಹಿಲ್ಲದೆ ಇಪ್ಪ ಅಸಂಖ್ಯಾತ ಮಹಾ ಪ್ರಮಥಗಣಂಗಳ ಅನುಪಮ ಪ್ರಸಾದವನು ಕೂಡೆಸನ್ನಿಹಿತಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ!